ಕನ್ನಡದಲ್ಲಿಅರುವತ್ತಮೂರು ಪುರಾತನರು : ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತರಾಗಿ ರುವ ಶರಣರು, ಕನ್ನ ಡ ವಚನಕಾರರು ಇವರನ್ನು ಪುರಾತನರು, ಪ್ರಮಥರು ಎಂದೂ ತಮಿಳರು ನಾಯನಾರ್ ಎಂದೂ ಕರೆಯುವರು. ತಮಿಳುನಾಡಿನ ಶಿವದೇವಾಲಯಗಳಲ್ಲೂ ಕರ್ನಾಟಕದಲ್ಲಿ ನಂಜನಗೂಡು, ಚಾಮರಾಜನಗರದ ದೇವಾಲಯಗಳಲ್ಲೂ ಈ ಭಕ್ತರ ವಿಗ್ರಹಗಳಿವೆ. ಇವರಲ್ಲಿ ಮೂವರು ತೇವಾರ ಎಂಬ ತಮಿಳು ವೇದ ಬರೆದು ಪ್ರಸಿದ್ಧರಾಗಿದ್ದಾರೆ. ತಮಿಳು, ಕನ್ನ ಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಇವರನ್ನು ಕುರಿತು ಹಲವಾರು ಮಂದಿ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಹಂಪೆಯ ಹರೀಶ್ವರ, ಸುರಂಗಕವಿ, ವೀರಭದ್ರಕವಿ, ಚತುರ್ಮುಖ ಬೊಮ್ಮರಸ, ನಿಜಗುಣಶಿವಯೋಗಿ, ಬಸವಪ್ಪಶಾಸ್ತ್ರೀ−ಇವರು ಈ ಪುರಾತನರನ್ನುಕುರಿತು ಕಾವ್ಯಗಳನ್ನು ಬರೆದಿದ್ದಾರೆ. ಬಸವಪುರಾಣಾದಿ ಗ್ರಂಥಗಳಲ್ಲೂ ಇವರ ಉಲ್ಲೇಖವಿದೆ. ಇವರಲ್ಲಿ 15 ಮಂದಿ ಬ್ರಾಹ್ಮಣರು, 12 ಮಂದಿ ಕ್ಷತ್ರಿಯರು, 5 ಮಂದಿ ವೈಶ್ಯರು, ಒಬ್ಬ ಪಂಚಮ, 24 ಮಂದಿ ಶೂದ್ರರು ಇಬ್ಬರು ಸ್ತ್ರೀಯರಾದಿಯಾಗಿ ಎಲ್ಲ ಕುಲ ಜಾತಿ ಪಂಥದವರೂ ಇದ್ದಾರಂದೂ ಇವರ ಕಾಲ ಪಸಕ್ತಶಕದ ಆರಂಭದಿಂದ 10ನೆಯ ಶತಮಾನದವರೆಗೆ ಹೋಗುತ್ತದೆಂದೂ ವಿದ್ವಾಂಸರ ಅಭಿಪ್ರಾಯ. ಇವನ್ನು ಕುರಿತು ತಮಿಳಿನಲ್ಲಿ "ಪೆರಿಯಪುರಾಣ"ವನ್ನು ಬರೆದ ಕವಿಯ ಹೆಸರು "ಶೆಕ್ಕಿರಾರ್", ಈ ಗ್ರಂಥವನ್ನು ಚಿದಂಬರಂ ಕ್ಷೇತ್ರದಲ್ಲಿ ಬರೆದಂತೆ ಪ್ರತೀತಿಯಿದೆ. 63 ಹೆಸರುಗಳು ಈ ರೀತಿ ಇವೆ: ಇವರನ್ನು ಕುರಿತ ಮಂಟಪಪೂಜೆ ವೀರಶೈವರಲ್ಲಿ ಬಳಕೆಯಲ್ಲಿದೆ. ಧಾರವಾಡದ ಮುರುಘಾಮಠದಲ್ಲಿ 63 ಹೆಸರಿನ ಕೋಣೆಗಳಿವೆ. ಬೆಳಗಾಂವಿ ಜಿಲ್ಲೆಯ ಅಥಣಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳು 63 ಮಂಟಪಗಳ ಸ್ಥಾಪನೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗರಹಳ್ಳಿ ಶ್ರೀ ಶರಣಬಸವೇಶ್ವರರ ದಾಸೊಹ ಮಠದಲ್ಲಿ ಕೂಡ ೬೩ ಮಂದಿ ಪುರಾತನರ ಮಂಟಪಗಳು ಇವೆ.